ಪಿ.ಯೂ.ಸಿ ಪರೀಕ್ಷೆಯ ಯಶಸ್ಸಿಗೆ ಸಪ್ತ ಸೂತ್ರಗಳು:

ಪಿ.ಯೂ.ಸಿ ಪರೀಕ್ಷೆಯ ಯಶಸ್ಸಿಗೆ ಸಪ್ತ ಸೂತ್ರಗಳು:
೧. ಪರೀಕ್ಷೆಯ ದಿನ ಬೇಗ ಏಳಿ. ಇದರಿಂದ ಒಂದಿಷ್ಟು ವಿಷಯಗಳನ್ನು ಓದಲು ಸಹಾಯವಾಗುತ್ತದೆ. ಕೆಲವು ಪ್ರಶ್ನೆಗಳನ್ನು ಊಹಿಸಿ ಮತ್ತು ಅದಕ್ಕೆ ಉತ್ತರವೇನೆಂಬುದನ್ನು ಹುಡುಕಿ. ಹಾಗೂ ಪರೀಕ್ಷೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಜೋಡಿಸಿಕೊಳ್ಳಿ.
೨.ಕನಿಷ್ಠ ಒಂದು ಘಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿರಿ.
೩. ಪರೀಕ್ಷೆ ಕೊಠಡಿಗೆ ತೆರಳುವಾಗ ಉದ್ವೇಗ, ಆತಂಕಕ್ಕೆ ಓಳಗಾಗಬೇಡಿ.  ಸಮಾಧಾನಿಯಾಗಿರಿ. ನನಗೆ ಗೊತ್ತಿರುವುದನ್ನು ಪ್ರಾಮಾಣಿಕವಾಗಿ ಬರೆಯುತ್ತೇನೆ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿರಲಿ.
೪. ಪ್ರಶ್ನೆ ಪತ್ರಿಕೆ ಓದಿಕೊಳ್ಳಲು ೧೫ ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಈ ಸಮಯದಲ್ಲಿ ನಾನು ಯಾವ ಪ್ರಶ್ನೆಗೆ ಉತ್ತರಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಿ.ಮತ್ತು ಉತ್ತರವೇನೆಂಬುದನ್ನು ಅಲೋಚಿಸಿ.
೫. ೩ ಘಂಟೆಗಳ ಕಾಲ ಏಕಾಗ್ರತೆಯಿಂದ, ಸಮಯ ಹಾಳು ಮಾಡದೇ ಸತತವಾಗಿ ಉತ್ತರಗಳನ್ನು ಬರೆಯಿರಿ. ಗೊತ್ತಿರುವ ಉತ್ತರಗಳನ್ನು ಮೊದಲು ಬರೆದುಬಿಡಿ. ವಿವರಣಾತ್ಮಕ ಉತ್ತರಗಳನ್ನು, ಪ್ಯಾರಗಳನ್ನಾಗಿ ವಿಂಗಡಿಸಿ ಬರೆದು, ಮುಖ್ಯ ಅಂಶಗಳಿಗೆ ಕೆಳಗಡೆ ಗೆರೆ ಎಳೆಯಿರಿ. ಸರಿಯಾದ ಪ್ರಶ್ನೆ ಸಂಖ್ಯೆಯನ್ನು ನಮೂದಿಸಲು ಮರೆಯಬೇಡಿ.
೬. ಕೊನೆಯ ೧೫ ನಿಮಿಷಗಳನ್ನು ನೀವು ಬರೆದಿರುವ ಉತ್ತರಗಳ ಪರಿಶೀಲನೆಗಾಗಿ ಉಪಯೋಗಿಸಿ. ಇದರಿಂದ ತಪ್ಪುಗಳನ್ನು ಸರಿಪಡಿಸಬಹುದು ಮತ್ತು ಅಕಸ್ಮಾತ್ ತಪ್ಪಿಹೋಗಿರುವ ಪ್ರಶ್ನೆಗಳಿಗೆ ಉತ್ತರ ಬರೆಯಬಹುದು.
೭. ಸಮಯ ಸಾಲದಿದ್ದಾಗ, ಮೊದಲು ಒಂದು, ಎರಡು ಅಂಕದ ಪ್ರಶ್ನೆಗಳಿಗೆ ಉತ್ತರ ಬರೆದುಬಿಡಿ. ನಂತರ ವಿವರಣಾತ್ಮಕ ಉತ್ತರಗಳ ಮುಖ್ಯಾಂಶಗಳನ್ನು ಒಂದರ ಕೆಳಗೊಂದು ಬರೆಯುತ್ತಾ ಹೋಗಿ.
ಪರೀಕ್ಷೆಯಲ್ಲಿ ಅಂಕ ತೆಗೆದುಕೊಳ್ಳುವುದೇ ಮುಖ್ಯ ಗುರಿ. ಇದನ್ನು ಅರ್ಥೈಸಿಕೊಳ್ಳಿ. ಗೊತ್ತಿರುವುದನ್ನು ಬರೆದು ಉತ್ತರ ಪತ್ರಿಕೆ ಕೊಟ್ಟು ಹೊರಬಂದ ನಂತರ ಹಳೆಯದೆಲ್ಲವನ್ನು ಮರೆತು ಇನ್ನೊಂದು ಪರೀಕ್ಷೆಗೆ ಹೊಸ ಹುರುಪಿನಿಂದ ಸಿದ್ದರಾಗಿ…

Advertisements
Post a comment or leave a trackback: Trackback URL.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: